ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಇಷ್ಟೊಂದು ಪ್ರಯೋಜನ ಪಡಿಬಹುದು

 

ಡಯಟ್ ಅಂದಾಕ್ಷಣ ನೀವು ತಿನ್ನೋ ಆಹಾರಗಳನ್ನ ಬದಿಲಿಸಬೇಕೆಂದಿಲ್ಲ . ನಿಮ್ಮ ತಿನಿಸುಗಳ ಸುಗಂಧವನ್ನು ಹೆಚ್ಚಿಸಲು ಕೆಲವೊಂದು ಮಸಾಲೆ ಮತ್ತು ಹರ್ಬ್ಸ್ ಬಳಸಿ.


ಜೊತೆಗೆ ಆರೋಗ್ಯಕ್ಕೂ ಅದು ಒಳ್ಳೆಯದು. ನಿಮ್ಮ ಡಯಟ್ ನಲ್ಲಿ ಬಳಸಲೇಬೇಕಾದ 5 ಪ್ರಮುಖ ಮಸಾಲೆ ಪದಾರ್ಥಗಳು ಮತ್ತು ಹರ್ಬ್ಸ್ ಯಾವುದು ಅಂತಾ ನೋಡೋಣ.

ಶುಂಠಿ : ಪ್ರತಿ ಮನೆಯಲ್ಲೂ ಸಿಗುವ ಮಸಾಲೆ ಪದಾರ್ಥ ಇದು. ಬಿಸಿಬಿಸಿಯಾದ ಶುಂಠಿ ಚಹಾ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಶುಂಠಿಯಲ್ಲಿ ಆರೋಗ್ಯಕ್ಕೆ ಪೂರಕ ಅಂಶಗಳಿವೆ. ತಲೆನೋವು ಮತ್ತು ಋತುಸ್ರಾವದ ನೋವನ್ನು ಕಡಿಮೆ ಮಾಡುತ್ತದೆ. ಶೀತ ಕೆಮ್ಮಿಗೂ ಮನೆಯಮದ್ದಾಗಿದೆ.

ದಾಲ್ಚಿನಿ : ಒಂದು ರೀತಿಯ ಸಿಹಿಯಾದ ಪರಿಮಳವುಳ್ಳ ಮಸಾಲೆ ಇದು. ಪ್ರತಿ ಮನೆಯಲ್ಲೂ ಇರಲೇಬೇಕು. ಚಹಾ ಮತ್ತು ಕೇಕ್ ಗೆ ದಾಲ್ಚಿನಿ ಉತ್ತಮ ಫ್ಲೇವರ್ ಕೊಡುತ್ತದೆ. 8 ವಾರಗಳ ಕಾಲ ದಾಲ್ಚಿನಿ ಬಳಸಿದರೆ ಬ್ಲಡ್ ಶುಗರ್ ಲೆವಲ್ ಕಡಿಮೆ ಮಾಡಬಹುದು.

ಕರಿಬೇವು : ಇದು ಅತ್ಯುತ್ತಮ ಸುಗಂಧವುಳ್ಳ ಹರ್ಬ್. ಸಾಮಾನ್ಯವಾಗಿ, ಎಲ್ಲಾ ತರಹದ ಒಗರಣೆಗೂ ಬಳಸುತ್ತಾರೆ . ಇದನ್ನು ಹಸಿಯಾಗಿ ತಿನ್ನುವುದರಿಂದ ಹೊಟ್ಟೆ  ನೋವು ಕಡಿಮೆಯಾಗುತ್ತದೆ. ಮಧುಮೇಹ, ಕೂದಲು ಬೆಳ್ಳಗಾಗುವ ಮತ್ತು ಬೆಳೆಯಲ್ಲೂ ಸಹಾಯ ವಾಗುತ್ತದೆ , ದೃಷ್ಟಿ ಹೀನತೆ, ಲಿವರ್ ಮತ್ತು ಕಿಡ್ನಿ ಸಮಸ್ಯೆಗೆ ಕೂಡ ಕರಿಬೇವು ಒಳ್ಳೆ ಮದ್ದು.

ಬೆಳ್ಳುಳ್ಳಿ :  ಸೂಪ್, ಉಪ್ಪಿನಕಾಯಿ, ಕರಿ ಹೀಗೆ ವಿವಿಧ ಖಾದ್ಯಗಳ ರುಚಿಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತದೆ. ಅಧಿಕ ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಸೇವಿಸುವುದು ಉತ್ತಮ. ಕೊಲೆಸ್ಟ್ರಾಲ್, ಕ್ಯಾನ್ಸರ್ ಹಾಗೂ ಹೃದಯದ ತೊಂದರೆಗೂ ಉತ್ತಮ ಮದ್ದು.

ಮೆಂತ್ಯ : ಇದು ಸ್ವಲ್ಪ ಕಹಿಯಾಗಿದ್ರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸ್ವಲ್ಪ ಹುರಿದು ಪುಡಿ ಮಾಡಿ ಹಾಕಿದರೆ ಒಳ್ಳೆ ಟೇಸ್ಟ್ ಕೊಡುತ್ತದೆ. ಮಧುಮೇಹಿಗಳು ಮೆಂತ್ಯ ಸೇವಿಸುವುದು ಉತ್ತಮ. ಇದು ಬ್ಲಡ್ ಶುಗರ್ ಲೆವಲ್ ಕಡಿಮೆ ಮಾಡುತ್ತದೆ. ಮಹಿಳೆಯರಿಗೆ ಬಾಣಂತಿ ಸಮಯದಲ್ಲಿ ನೀಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು